ಕನ್ನಡಿಗ ನಾನು!!
//೧//
ಕನ್ನಡ... ಕನ್ನಡಿಗ..
  
ನಾನು ಕನ್ನಡಿಗ...
ಕನ್ನಡಿಗನಪ್ಪ ನಾನು ಕನ್ನಡಿಗ.
ಜಗದಲ್ಲೇ ಸುಂದರ
ಭಾಷೆಯನ್ನಾಡುವ 
ಭಾಷಿಕ ನಾನು - ಕನ್ನಡಿಗ.
ಜಾಗದಲ್ಲೇ ಮೋಹಕ 
ಲಿಪಿ ಹೊಂದಿರುವವ
ಭಾಷಿಕ ನಾನು - ಕನ್ನಡಿಗ.
ಎಲ್ಲಿ ಹೋದರೂ ಕೇಳಿದಾಗ  ಮನಕೆ
ಇಂಪನ್ನು ಕೊಡುವ ಈ ಇಂಪಾದ ಭಾಷೆಯ  ಗುಲಾಮ ನಾನು - ಕನ್ನಡಿಗ.
//೨//
ಉತ್ತರದಲ್ಲಿ - ಮರಾಠರಿಗೆ  ಮೋಹಗೊಂಡು
ತನ್ನತನವನ್ನೇ ಮರೆಯುತ್ತಿರು ವವರಲ್ಲಿ ನಾನು ಒಬ್ಬ - ಕನ್ನಡಿಗ.
ಪೂರ್ವದಲ್ಲಿ - ಆಂಧ್ರರಿಗೆ ಮಣೆಹಾಕಿ 
ತೆಲೆಮೇಲೆ ಕುಳ್ಳರಿಸುವವರಲ್ಲಿ ನಾನು ಒಬ್ಬ - ಕನ್ನಡಿಗ.
ದಕ್ಷಿಣದಲ್ಲಿ - ತಮಿಳು ಮಲಯಾಳಿ ಗಳಿಗೆ ಸೋತು 
ಶರಣಾಗಿರುವ ವೀರ "ಓರಾಟಗಾರ"ರಲ್ಲಿ ನಾನು ಒಬ್ಬ - ಕನ್ನಡಿಗ 
"ಇವ ನಮ್ಮವ, ಇವ ನಮ್ಮವ ಎಂದು ಪರರನ್ನು ಕಾಣು" ಎಂದು 
ಹಿರಿಯರು ಹೇಳಿದ ಮಾತನ್ನು ಈ ಥರ ಪಾಲಿಸಿ
ನಮ್ಮತನವನ್ನೇ ಮರೆತಿರುವವರು ನಾವೆಲ್ಲ ಕನ್ನಡಿಗರು!!
- ರವಿ
ತಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!!   
 
 
Comments
Post a Comment